ಓ ಸತ್ಯವಿಶ್ವಾಸಿಗಳೇ, ನಿಮಗೆ
ಕೊಲೆಯ ಮುಕದ್ದಮೆಗಳಲ್ಲಿ ಪ್ರತೀಕಾರವನ್ನು ಶಾಸನಗೊಳಿಸಲಾಗಿದೆ. ಸ್ವತಂತ್ರನು ವಧಿಸಿದ್ದರೆ ಆ
ಸ್ವತಂತ್ರನೊಂದಿಗೇ ಸೇಡು ತಿರಿಸಬೇಕು. ಗುಲಾಮನು ಘಾತಕನಾದರೆ ಗುಲಾಮನೇ ವಧಿಸಲ್ಪಡಬೇಕು ಮತ್ತು
ಸ್ತ್ರೀಯು ಈ ಅಪರಾಧವೆಸಗಿದರೆ ಆ ಸ್ತ್ರಿಯೋಂದಿಗೇ ಪ್ರತೀಕಾರವೆಸಗಬೇಕು. ಒಂದು ವೇಳೆ
ಘಾತಕನೊಬ್ಬನೊಂದಿಗೆ ಅವನ ಸಹೋದರನು ಸೌಜನ್ಯದಿಂದ ವರ್ತಿಸಲು ಸಿದ್ದನಾದರೆ "ಮಹ್'ರೂಫ್"
(ಸರ್ವವಿಧಿತ) ರೀತಿಯಲ್ಲಿ ರಕ್ತಕಾಣೆಕೆಯ ತಿರ್ಮಾನವಾಗಬೇಕು. ಮತ್ತು ಘಾತಕನು ನ್ಯಾಯವಾಗಿ ಪರಿಹಾರ
ಧನವನ್ನು ಪಾವತಿ ಮಾಡಲು ಬದ್ದನಾಗಿರುತ್ತಾನೆ. ಇದು ನಿಮ್ಮ ಪಾಲಕ ಪ್ರಭುವಿನ ಕಡೆಯಿಂದ ಸೌಲಭ್ಯವೂ
ಕರುಣೆಯೂ ಆಗಿದೆ. ಹಿಗಿದ್ದೂ ಯಾವನಾದರೂ ಹದಮೀರಿದರೆ ಅವನಿಗೆ ವೇದನಾಜನಕ ಶಿಕ್ಷೆ ಇದೆ.
[ಕುರಾನ್: 2: 178]
No comments:
Post a Comment