(ಈ ಯಾಥಾರ್ಥೆತೆಯನ್ನು ಅರಿತುಕೊಳ್ಳಲಿಕ್ಕಾಗಿ
ಯಾವುದಾದರೂ ಕುರುಹು ಅಥವಾ ದೃಷ್ಟಾಂತ ಬೇಕಾದರೆ) ಆಕಾಶಗಳ ಮತ್ತು ಭೂಮಿಯ ನಿರ್ಮಾಣದಲ್ಲಿ, ಇರುಳು ಹಗಲುಗಳು ಒಂದಂರ ಹಿಂದೆ ಇನ್ನೊಂದರಂತೆ ನಿರಂತರವಾಗಿ ಬರುತ್ತಿರುವುದರಲ್ಲಿ,
ಜನೋಪಗೋಗಿ ಸಾಮಗ್ರಿಗಳನ್ನು ಹೊತ್ತುಕೊಂಡು ಜಲಧಿಗಳಲ್ಲಿ ಸಂಚರಿಸುತ್ತಿರುವ
ನೌಕೆಗಳಲ್ಲಿ, ಅಲ್ಲಾಹನು ಆಕಾಶದಿಂದ ಸುರಿಸಿ ಅದರ ಮೂಲಕ ಭೂಮಿಯನ್ನು
ನಿರ್ಜಿವಾವಸ್ಥೆಯಾ ಬಳಿಕ ಸಜಿವಗೊಳಿಸಿ, ಈ ವ್ಯವಸ್ಥೆಯ ಮೂಲಕ
ಭೂಮಿಯಲ್ಲಿ ತರತರದ ಜೀವರಾಶಿಗಳು ಹರಡಿರುವಂತೆ ಮಾಡಿದ ಮಳೆ ನೀರಿನಲ್ಲಿ, ಮಾರುತಗಳ ಚಲನೆಯಲ್ಲಿ ಹಾಗೂ ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿಸಲ್ಪಟ್ಟಿರುವ
ಮೋಡಗಳಲ್ಲಿ ನಿಶ್ಚಯವಾಗಿಯೂ ವಿಚಾರವಂತರಿಗೆ ಅನೇಕಾನೇಕ ದೃಷ್ಟಾಂತಗಳಿವೆ.
[ಕುರಾನ್: 2: 164]
No comments:
Post a Comment