Tuesday, 11 March 2014

ರಮದಾನ್ ಕುರಿತು ಕುರಾನ್ ಏನು ಹೇಳುತ್ತದೆ

ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ನಿರ್ಬಂಧಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ನಿರ್ಬಂಧಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಟೇಯ ಗುಣವಿಶೇಷಣವುಂಟಾಗುವುದೆಂದು ಆಶಿಸಲಾಗಿದೆ.
[ಕುರಾನ್: 2: 178]

"ರಮಾದಾನ್ ಜನರಿಗೆ ಮಾರ್ಗದರ್ಶನವಾಗಿ, ಸತ್ಯಾಸತ್ಯ ವಿವೇಚಕವಾಗಿ ಸುವ್ಯಕ್ತ ದ್ರಷ್ಟಾಂತಗಳೊಂದಿಗೆ ಕುರಾನ್ ಅವತ್ತಿರ್ಣಗೊಂಡ ತಿಂಗಳಾಗಿವೆ. ಆದುದರಿಂದ ಆ ತಿಂಗಳಲ್ಲಿ ನಿಮ್ಮಲ್ಲಿ ಯಾರೂ ಉಪಸಿತ್ಥರಿರುವರೋ ಅವರು  ಉಪವಾಸ ಆಚರಿಸಲಿ."
[ಕುರಾನ್: 2: 183]

ಎಣೆಕೆಯ ಕೆಲವೇ ದಿನಗಳ ಉಪವಾಸ ವ್ರತವಿದು. ನೀವೆಲ್ಲಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಇತರ ದಿನಗಳಲ್ಲಿ ಅಷ್ಟೇ ಸಂಖ್ಯೆಯನ್ನು ಪೂರ್ತಿಗೊಳಿಸಿ ಕೊಲ್ಲಬೇಕು. ಉಪವಾಸವಿರಲು ಶಕ್ತರಾದವರು (ಉಪವಾಸವಿರದಿದ್ದರೆ) ಪ್ರಾಯಶ್ಚಿತ್ತವು ಓರ್ವ ಬಡವನಿಗೆ ಆಹಾರ ನೀಡುವುದಾಗಿದೆ. ಮತ್ತು ತನ್ನ ಇಚ್ಛೆಯಿಂದ ಇನ್ನಷ್ಟು ಸತ್ಕಾರ್ಯ ಮಾಡಿದರೆ ಇದು ಅವನಿಗೆ ಇನ್ನೂ ಉತ್ತಮ. ಆದರೆ ನೀವು ಅರಿಯುವವರಾಗಿದ್ದಾರೆ ಉಪವಾಸವಿರುವುದೇ ನಿಮಗೆ ಅತ್ಯುತ್ತಮ.
[ಕುರಾನ್: 2: 184]

ಮಾನವರಿಗೆ ಸಾಧ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಲಗೊಂಡಿರುವ "ಕುರಾನ್" ಅವತಿರ್ಣಗೊಂಡ ತಿಂಗಳು "ರಮಝಾನ್" ಆಗಿರುತ್ತದೆ. ಆದುದರಿಂದ ಯಾವಾನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ಪ್ರತವನ್ನಾಚರಿಸಬೇಕು...
[ಕುರಾನ್: 2: 185]

No comments:

Post a Comment